ಅರ್ಜುನ್ ಸರ್ಜಾಗೆ ಶಾಕ್ ಕೊಟ್ಟ ಚಿರಂಜೀವಿ ಸರ್ಜಾ | Filmibeat Kannada

2018-01-17 1,503

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ 'ಪ್ರೇಮ ಬರಹ' ಸಿನಿಮಾದ ರಿಲೀಸ್ ದಿನಾಂಕ ಘೋಷಿಸಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಫೆಬ್ರವರಿ 9 ರಂದು ಗಾಂಧಿನಗರದಲ್ಲಿ 'ಪ್ರೇಮ ಬರಹ' ಮೊಳಗಲಿದ್ದು, ಸರ್ಜಾ ಕುಟುಂಬದ ಕುಡಿಯನ್ನ ಕನ್ನಡಕ್ಕೆ ಸ್ವಾಗತಿಸಲು ಸ್ಯಾಂಡಲ್ ವುಡ್ ಸಜ್ಜಾಗಿದೆ.

ಇಷ್ಟು ದಿನ ಅರ್ಜುನ್ ಸರ್ಜಾ ಅವರ ಸೋದರಳಿಯರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಇಬ್ಬರು 'ಪ್ರೇಮ ಬರಹ' ಚಿತ್ರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಆದ್ರೆ, ಈಗೊಂದು ಅಚ್ಚರಿಯ ಅಂಶ ಹೊರಬಿದ್ದಿದೆ.

ಅರ್ಜುನ್ ಸರ್ಜಾ ಪುತ್ರಿಯನ್ನ ಸ್ವಾಗತಿಸಲು ಸಜ್ಜಾಗುತ್ತಿದ್ದ ಚಿರು ಸರ್ಜಾ, ಈಗ ಸೋದರ ಮಾವನ ಎದುರು ಕಾಂಪಿಟೇಶನ್ ಮಾಡಬೇಕಾಗಿದೆ.

ಬಾಕ್ಸ್ ಆಫೀಸ್ ನಲ್ಲಿ ಇಬ್ಬರು ಕಿತ್ತಾಡಬೇಕಿದೆ. ಏನಿದು ಹೊಸ ವಿಷ್ಯ?

ಫೆಬ್ರವರಿ 9 ರಂದು ಬಿಡುಗಡೆಯಾಗಲಿರುವ 'ಪ್ರೇಮ ಬರಹ' ಚಿತ್ರಕ್ಕೆ ನಟ ಚಿರಂಜೀವಿ ಸರ್ಜಾ ಶಾಕ್ ನೀಡಿದ್ದಾರೆ. ಸೋದರ ಮಾವನ ಚಿತ್ರದ ಎದುರು ತಮ್ಮ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದಾರೆ ಚಿರು ಸರ್ಜಾ.
Arjun Sarja daughter Aishwarya starrer Prema Baraha and Chiranjeevi Sarja starrer Samhara movies will be releasing at a time on February 9th. Chiranjeevi Sarja gives shock to Arjun Sarja.

Videos similaires